🎬 Hudugru (2020)

ನೀರಲ್ಲಿ ಸಣ್ಣ

Neeralli Sanna

🎤 Sonu Nigam, Sunitha Gopuraj🎼 V. Harikrishna📅 2020

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ

ಚೂರಾದ ಚಂದ್ರನೀಗ….

ಇಲ್ಲೊಂದು ಚೂರು, ಅಲ್ಲೊಂದು ಚೂರು

ಒಂದಾಗಬೇಕು ಬೇಗ…

ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ…

ನಡುವೆಲ್ಲೊ ಮೆಲ್ಲಗೆ ಮಾಯವಾದೆಯ….

ಇದ್ದಲ್ಲೆ ಆಲಿಸಬಲ್ಲೆ ನಿನ್ನೆಲ್ಲಾ ಪಿಸುಮಾತು

ನನ್ನಲ್ಲೆ ನೀನಿರುವಾಗ ಇನ್ನೇಕೆ ರುಜುವಾತು…

ನೆನಪಿನಲ್ಲೆ ನೀನೀಗ ಎಂದಿಗಿಂತ ಸನಿಹ‌

ಅಳಿಸಲಾರೆ ನಾನೆಂದು ಮನದ ಗೋಡೆ ಬರಹ…

ಸಹಿಯಾದ ಮೇಲೆ ಸಹಗೀತೆಯೊಂದು ಮರೆಯಾಯಿತೇಕೆ ನೋಡು,

ಇಲ್ಲೊಂದು ಸಾಲು, ಅಲ್ಲೊಂದು ಸಾಲು, ಬೆರೆತಾಗಲೇನೆ ಹಾಡು…

ದಾರೀಲಿ ಹೂಗಿಡವಿಂದು ಕಟ್ಟಿಲ್ಲ ಹೂಮಾಲೆ

ಕಣ್ಣಲ್ಲಿ ಕಣ್ಣಿಡು ನೀನು, ಮತ್ತೆಲ್ಲ ಆಮೇಲೆ…

ಕಾಣಬಲ್ಲೆ ಕನಸಲ್ಲೂ, ನಿನ್ನ ಹೆಜ್ಜೆ ಗುರುತು

ಕೇಳಬೇಡ ಇನ್ನೇನು ನೀನು ನನ್ನ ಕುರಿತು…

ಎದೆಯಾಳದಿಂದ ಮೃದು ಮೌನವೊಂದು ಕರೆವಾಗ ಜಂಟಿಯಾಗಿ,

ಇಲ್ಲೊಂದು ಜೀವ, ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ….

Music by V. Harikrishna · Vocals by Sonu Nigam, Sunitha Gopuraj

From the film "Hudugru" (2020)