🎬 Raghu Dixit (Folk Album) (2020)

ಕೊಡಗಣ ಕೋಳಿ ನುಂಗಿತ್ತ

Kodagana Koli Nungitha

🎤 Raghu Dixit🎼 Raghu Dixit📅 2020

ಕೊಡಗಣ ಕೋಳಿ ನುಂಗಿತ್ತ

ನೋಡವ್ವ ತಂಗಿ

ಕೊಡಗನ ಕೋಳಿ ನುಂಗಿತ್ತ

ಆಡು ಆನೆಯ ನುಂಗಿ

ಗೋಡೆ ಸುಣ್ಣವ ನುಂಗಿ

ಆಡಲು ಬಂದ ಪಾತರದವಳ

ಮದ್ದಲಿ ನುಂಗಿತ್ತ ತಂಗಿ

ಕೊಡಗನ ಕೋಳಿ ನುಂಗಿತ್ತ

ನೋಡವ್ವ ತಂಗಿ

ಕೊಡಗನ ಕೋಳಿ ನುಂಗಿತ್ತ

ವೊಳ್ಳು ವನಕೆಯ ನುಂಗಿ

ಕಲ್ಲು ಗೂಟವ ನುಂಗಿ

ಮೆಲ್ಲಲು ಬಂದ ಮುದುಕಿಯನ್ನೆ ನೆಲ್ಲು ನುಂಗಿತ್ತ ತಂಗಿ

ಕೊಡಗನ ಕೋಳಿ ನುಂಗಿತ್ತ

ನೋಡವ್ವ ತಂಗಿ

ಕೊಡಗನ ಕೋಳಿ ನುಂಗಿತ್ತ

ಎತ್ತು ಜಟ್ಟಗಿ ನುಂಗಿ

ಬತ್ತ ಬಾನವ ನುಂಗಿ

ಮುಕ್ಕುಟ ತಿರವೊ ಅಣ್ಣ

ನನ್ನ ಮೇಲಿ ನುಂಗಿತ್ತ ತಂಗಿ

ಕೊಡಗನ ಕೋಳಿ ನುಂಗಿತ್ತ

ನೋಡವ್ವ ತಂಗಿ

ಕೊಡಗನ ಕೋಳಿ ನುಂಗಿತ್ತ

ಗುಡ್ಡ ಗವಿಯನು ನುಂಗಿ

ಗವಿಯು ಇರುವೆಯ ನುಂಗಿ

ಗೋವಿಂದ ಗುರುವಿನ ಪಡವೆ ನನ್ನೆ ನುಂಗಿತ್ತ ತಂಗಿ

ಕೊಡಗನ ಕೋಳಿ ನುಂಗಿತ್ತ

Music by Raghu Dixit · Vocals by Raghu Dixit

From the film "Raghu Dixit (Folk Album)" (2020)