ಕರ್ಮದ ಕಲ್ಲನು ಎಡವಿದ ಮನುಜನ
ಬೆರಳಿನ ಗಾಯವು ಮಾಯದು
ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ
ಗುಡಿಯಲಿ ದೈವವು ಕಾಯದು
ಕತ್ತಲನು ಮಣಿಸೋಕೆ ಹಚ್ಚಿ ಇಟ್ಟ ದೀಪ
ಊರೂರನ್ನೇ ಸುಡುವಂತ ಜ್ವಾಲೆಯಾಯಿತೇನೊ
ಓ ಗರ್ಭದಲೆ ಆದ ಗಾಯ ಹಣೆಬರಹ
ಯಾತಕ್ಕೆ ಮದ್ದು ಅರಸಿ ಅಲೆದಾಡುವೆ
ಯಾರ ಜೊತೆ ಅರಿಯದೆ ನಿನ್ನ ಕಲಹ
ನಿನ್ನನ್ನೆ ನೀನು ಹುಡುಕಿ ಕಳೆದೋಗುವೆ
ನುಂಗಿಕೊಂಡರೂನು ಮಾಡೊ ಪಾಪನೆಲ್ಲ ಗಂಗೆ
ಬಿಟ್ಟು ಹೋಗುತ್ತಾಳೆ ಪಶ್ಚಾತ್ತಾಪನೆಲ್ಲ ಅಂಗೆ
ದರ್ಪದಲಿ ಮೆರೆವಾಗ ತೊಟ್ಟ ಹೂವಾ ಮಾಲೆ
ನಾಳೆಗೆ ಹೂ ಉದುರಿ ಕುಣಿಕೆಯಾಗದೇನೊ