🎬 Raghavendra Beejadi (2023)

ಇರಬೇಕು ಇರುವಂತೆ

Irabeku Iruvante

🎤 Raghavendra Beejadi🎼 Raghavendra Beejadi📅 2023

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ

ಮಳೆ ಸುರಿಸಿ ಹಗುರಾದ ಮುಗಿಲಿನಂತೆ

ಮಳೆ ಸುರಿಸಿ ಹಗುರಾದ ಮುಗಿಲಿನಂತೆ

ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ

ಬೆಳಕಿನುಂಡೆಯ ಬಾನಿಗುರುಳು ಬಿಟ್ಟು

ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು

ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು

ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ

ತಣ್ಣಗಿನ ಆಸರೆಯ ನೆರಳ ಕೊಟ್ಟು

ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ

ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು

ತಾನು ಕೆಸರಲಿ ಕುಸಿಯುತ್ತಿದ್ದರೂ ತಾವರೆಯು

ಮರಿದುಂಬಿಗಳ ಪೊರೆವ ತೊಟ್ಟಿಲಾಗಿ

ಹೇಗೆ ತಾಯ್ತನವನ್ನು ಪ್ರೀತಿಯಲಿ ಮೆರೆಯುವುದೋ

ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು

ದಾರಿಯುದ್ದಕೂ ಪೈರು ನಗುವಂತೆ ನೀರುಣಿಸಿ

ಹಾಲುತೆನೆಯಲಿ ಅಮೃತ ತುಂಬಿ ನದಿಯು

ಹೇಗೆ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ

ಹಾಗೆ ಕೊನೆಗಾಣಿಸು ಕೃಪೆಯನಿಟ್ಟು

Music by Raghavendra Beejadi · Vocals by Raghavendra Beejadi

From the film "Raghavendra Beejadi" (2023)