🎬 Just Maath Maathali (2010)

ಬಾನಿನ ಹನಿಯು

Baanina Haniyu

🎤 Raghu Dixit🎼 Raghu Dixit📅 2010

ಬಾನಿನ ಹನಿಯು ಧರೆಯಿಂದ ಪುಟಿದು

ಕಾರಂಜಿ ಭುವಿ ಸೇರಿದೆ

ಸೋತ ಹೃದಯ ನಾಕಂಡ ಕನಸು

ನಿಜವೆಂದು ನಗೆಬೀರಿದೆ

ಬಯಕೆ ಮರೆವೆ, ಹೃದಯ ಕಡಿವೆ,

ಇದು ಕಹಿಯೊ ಸಿಹಿಯೊ, ಕಣ್ ಹನಿಯೊ ಅರಿವೊ

ಇದು ನನ್ನ ಹಸಿರು ಕವನ

ಜಸ್ಟ್ ಮಾತ್ ಮಾತಲ್ಲಿ…

ಶಿ ಸ್ಟೋಲ್ ಮೈ ಹಾರ್ಟ್ ಅವೇ

ಜಸ್ಟ್ ಮಾತ್ ಮಾತಲ್ಲಿ…

ಶಿ ಟುಕ್ ಮೈ ಬ್ರೆತ್ ಅವೇ

ಸುರಿವ ಮಳೆ ನಿಂತು, ತಂಪಾಗಿದೆ

ಬರಿದಾದ ಭುವಿ ಮತ್ತೆ, ಹಸಿರಾಗಿದೆ

ಗೂಡ ಬಿಡಲು ಹಕ್ಕಿಯು ಹಾತೊರೆದಿದೆ

ತನ್ನ ನೆಂದ ರೆಕ್ಕೆಯ ಬಾನಿಗೊಡ್ಡಿದೆ

ಸೋತ ಈ ಸಮಯ ಹಾಡಾಗಿದೆ

ಇದು ಕಹಿಯೊ ಸಿಹಿಯೊ, ಕಣ್ ಹನಿಯೊ ಅರಿವೊ

ಇದು ನನ್ನ ಹಸಿರು ಕವನ…

ಜಸ್ಟ್ ಮಾತ್ ಮಾತಲ್ಲಿ…

ಶಿ ಸ್ಟೋಲ್ ಮೈ ಹಾರ್ಟ್ ಅವೇ

ಜಸ್ಟ್ ಮಾತ್ ಮಾತಲ್ಲಿ…

ಶಿ ಟುಕ್ ಮೈ ಬ್ರೆತ್ ಅವೇ

Music by Raghu Dixit · Vocals by Raghu Dixit

From the film "Just Maath Maathali" (2010)