🎬 M D Pallavi (Album/Single) (2020)

ಅಮ್ಮ ನಾನು ದೇವರಾಣೆ

Amma Nanu Devarane

🎤 M D Pallavi🎼 M D Pallavi (Featured Artist)📅 2020

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ಎಲ್ಲ ಸೇರಿ ನನ್ನ ಬಾಯಿಗೆ, ಬೆಣ್ಣೆಯ ಮೆತ್ತಿದರಮ್ಮ

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ನೀನೆ ನೋಡು ಬೆಣ್ಣೆ ಗಡಿಗೆ, ಸೂರಿನ ನಿಲುವಲ್ಲಿ

ಹೇಗೆ ತಾನೆ ತೆಗೆಯಲಿ ಅಮ್ಮ, ನನ್ನ ಪುಟ್ಟ ಕೈಗಳಿಂದ

||ಅಮ್ಮ ನಾನು||

ಶಾಮ ಹೇಳಿದಾ…

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ವರಸುತ್ತ

ಬೆಣ್ಣೆ ಮೆತ್ತಿದಾ ಕೈಯ, ಬೆನ್ನ ಹಿಂದೆ ಮರೆಸುತ್ತಾ

||ಅಮ್ಮ ನಾನು||

ಎತ್ತಿದ ಕೈಯ ಕಡೆಗೊಲನ್ನ, ಮೂಲೆಲಿಟ್ಟು ನಕ್ಕಳು ಗೋಪಿ

ಸೂರದಾಸ ಪ್ರಿಯ ಶಾಮನಾ, ಮುತ್ತಿಟ್ಟು ನಕ್ಕಳು ಗೋಪಿ

||ಅಮ್ಮ ನಾನು||

Music by M D Pallavi (Featured Artist) · Vocals by M D Pallavi

From the film "M D Pallavi (Album/Single)" (2020)